- Advertisement -
ಬೆಂಗಳೂರು: ರಾಜ್ಯಕ್ಕೆ ಶೀಘ್ರದಲ್ಲಿಯೇ ಪೂರ್ವ ಮುಂಗಾರು ಮಳೆ ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾ.11 ಹಾಗೂ 12 ರಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ (ಬೆಂಗಳೂರು) ಮತ್ತು ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.ಬಂಗಾಳ ಉಪಸಾಗರದಲ್ಲಿ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆ ಮಾ.11 ಹಾಗೂ 12 ರಂದು ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದು ಈ ವರ್ಷದ ಪೂರ್ವ ಮುಂಗಾರು ಮಳೆಯ ಅಧಿಕೃತ ಪ್ರವೇಶವಾಗಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಿಗೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಮಾ.9 ರಿಂದ 15 ರವರೆಗೆ ಒಣಹವೆ ಇರಲಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶ 37- 38 ಡಿ.ಸೆ. ಹಾಗೂ ಬೆಂಗಳೂರಿನಲ್ಲಿ ಈ ವಾರ 33-34 ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 20 ಡಿ.ಸೆ. ಇರುವ ಸಾಧ್ಯತೆ ಇದೆ. ಭಾನುವಾರ ಬೆಂಗಳೂರಿನಲ್ಲಿ ಗರಿಷ್ಠ 34 ಡಿ.ಸೆ., ಕನಿಷ್ಠ 19 ಡಿ.ಸೆ. ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ 39 ಡಿ.ಸೆ., ಕೊಪ್ಪಳದಲ್ಲಿ 38 ಡಿ.ಸೆ., ಧಾರವಾಡ, ಗದಗ, ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿ.ಸೆ. ದಾಖಲಾಗಿದೆ. ಹಾವೇರಿಯಲ್ಲಿ 37 ಡಿ.ಸೆ., ಮಂಗಳೂರಲ್ಲಿ 33 ಡಿ.ಸೆ. ಉಷ್ಣಾಂಶ ದಾಖಲಾಗಿದೆ.

ಮಳೆ ಬಿದ್ದರೂ ಬಿಸಿಲಲ್ಲಿ ವ್ಯತ್ಯಾಸ ಇಲ್ಲ!
ಆದರೆ ಈ ಎರಡು ದಿನ ಸುರಿಯಲಿರುವ ಪೂರ್ವ ಮುಂಗಾರು ಮಳೆಯ ಅಬ್ಬರ ಹೆಚ್ಚಿರುವುದಿಲ್ಲ. ತುಂತುರು ಮಳೆಯಷ್ಟೇ ಅಲ್ಲಲ್ಲಿ ಆಗಲಿರುವುದರಿಂದ ಬಿಸಿಲಿನ ತೀವ್ರತೆ ಹೀಗೆ ಮುಂದುವರಿಯಲಿದೆ. ಕರಾವಳಿಯಲ್ಲಿಯೂ ಗರಿಷ್ಠ ತಾಪಮಾನ ಹೆಚ್ಚಳ ಹಾಗೂ ಹ್ಯುಮಿಡಿಟಿ ಪ್ರಭಾವ ಇರಲಿದೆ. ಬೆಂಗಳೂರಲ್ಲಿ ಕನಿಷ್ಠ 20 ಗರಿಷ್ಠ 34 ಡಿಗ್ರಿ ಸೆಂಟಿಗ್ರೇಡ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಮುಂಗಾರು ಎಪ್ರಿಲ್ ಮೇ ತಿಂಗಳಲ್ಲಿ ಹೆಚ್ಚಾದಂತೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಬಿಸಿಲಲ್ಲಿ ಸ್ವಲ್ಪ ವ್ಯತ್ಯಾಸ ಆಗಲಿದೆ ಎಂದು ಹವಾಮಾನ ತಜ್ಞರಾದ ಸಿಎಸ್ ಪಾಟೀಲ್ ವಿಜಯ ಕರ್ನಾಟಕಕ್ಕೆ ಹೇಳಿದ್ದಾರೆ.
- Advertisement -